Wednesday, September 23, 2026

ಗಣೇಶನೂ ನರ್ಮದಾ ನದಿಯೂ ಕಲಿಸಿದ ಶಾಂತಿಯ ಪಾಠ — ಮಾಧವ

 


ಪ್ರತಿ ಭಾನುವಾರವೂ ಮಾಧವ ಅಜ್ಜಿಯ ಜೊತೆ ಪುಟ್ಟ ಗಣೇಶನ ದೇವಸ್ಥಾನಕ್ಕೆ ಹೋಗುತ್ತಿದ್ದ.

ದೇವಸ್ಥಾನವು ಪವಿತ್ರ ನರ್ಮದಾ ನದಿಯ ಪಕ್ಕದಲ್ಲಿತ್ತು.

ಗಣೇಶನಿಗೆ ಪ್ರಾರ್ಥನೆ ಮಾಡಿದ ನಂತರ, ಮಾಧವ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕುಳಿತು ನದಿಯನ್ನು ನೋಡುತ್ತಿದ್ದ.

ಅದು ಅವನಿಗೆ ತುಂಬಾ ಇಷ್ಟ.

ಒಂದು ದಿನ, ಹಿಂದಿನ ರಾತ್ರಿ ತುಂಬಾ ಮಳೆ ಬಂದಿತ್ತು.

ಬೆಳಗ್ಗೆ ಮಾಧವ ತನ್ನ ನೆಚ್ಚಿನ ಮೆಟ್ಟಿಲುಗಳ ಕಡೆಗೆ ಓಡಿದ.

ಆದರೆ ಅಲ್ಲಿ ಮೆಟ್ಟಿಲುಗಳು ಕಾಣಿಸಲಿಲ್ಲ!

“ಅಜ್ಜಿ! ನನ್ನ ಮೆಟ್ಟಿಲುಗಳು ಎಲ್ಲಿ ಹೋದವು?” ಎಂದು ಕೇಳಿದ.

“ನರ್ಮದಾ ನದಿ ತುಂಬಿ ಹರಿಯುತ್ತಿದೆ,” ಎಂದು ಅಜ್ಜಿ ಹೇಳಿದರು.

“ಆದರೆ ನಾನು ಇಲ್ಲಿ ಪ್ರತಿ ಭಾನುವಾರ ಕುಳಿತುಕೊಳ್ಳುತ್ತೀನಲ್ಲ!” ಎಂದು ಮಾಧವ ಬೇಸರಪಟ್ಟ.

ಆಗ ಮಾಧವ ಒಂದು ವಿಷಯ ಗಮನಿಸಿದ.

ನೀರು ಎಷ್ಟು ವೇಗವಾಗಿ  ಹರಿಯುತ್ತಿದ್ದರು, ನಿಲ್ಲದೆ ಜೋರಾಗಿ ಬಂಡೆಗಳಿಗೆ ಅಪ್ಪಳಿಸುತ್ತಿತು .  

ಮಾಧವ ದೇವಸ್ಥಾನದೊಳಗಿನ ಗಣೇಶನನ್ನು ನೋಡಿದ.

“ಗಣೇಶ… ಎಲ್ಲವೂ ಬದಲಾಗಿದೆ.”

“ಆದರೂ ನದಿ ನಿಲ್ಲಲಿಲ್ಲ.”

ಕೆಲವು ದಿನಗಳ ನಂತರ, ನದಿ ಮತ್ತೆ ಶಾಂತವಾಯಿತು.

ಮಾಧವ ಓಡುತ್ತಾ ಮೆಟ್ಟಿಲುಗಳ ಬಳಿಗೆ ಬಂದ.

“ಅಜ್ಜಿ! ನೋಡು! ನನ್ನ ಮೆಟ್ಟಿಲುಗಳು ಮತ್ತೆ ಬಂದಿವೆ!”

ಹರಿಯುವ ನೀರಿನಲ್ಲಿ ಕಾಲುಗಳನ್ನಿಟ್ಟು ಮಾಧವ ಆನಂದಿಸಿದನು.

ಆಗ ಮಾಧವ ಗಣೇಶನಿಗೆ ಕೈಮುಗಿದು, “ಗಣೇಶಾ ನನಗೂ ನದಿಯ ಹಾಗೆ ಶಾಂತವಾಗಿರಲು ಕಲಿಸು”, ಎಂದು ಪ್ರಾರ್ಥಿಸಿದ.

ಕಥೆಯ ನೀತಿ:ಬದಲಾವಣೆ ಬಂದರೂ ಹೆದರಬಾರದು. ನದಿಯಂತೆ ಶಾಂತವಾಗಿದ್ದು, ಮುಂದೆ ಸಾಗಬೇಕು.

ಇಂತಿ,

ಲೇಖಕಿ ಸಹನೆ.


No comments:

Post a Comment