Wednesday, May 26, 2010

ಅತಿಯಾದ ಭರವಸೆ !!!!!!!!!!!


ನಿ ಎಲ್ಲಿ ಹೋದೆ,
ನಿನ್ನ ಈ ಪ್ರಾಣ
ನಿನನ್ನು ಹುಡುಕುತಾ
ಬಲು ದೂರ ತಲುಪಿ .........ಸಿಗದ ಕಾರಣ
ಎದೆ ಕುಸಿದು, ನೆನಪೆಲ್ಲ ಮುರಿದು
ನಾ ಆದೆ ಒಂಟಿ ಜೀವನದ ಸಹವಾಸಿ,
ನಾ ಸೇರಿದೆ ಒಂಟಿ ಜೀವನದ ಸಂಘ.

ನೆನಪಿದೆ ಮೊದಲ ಕನಸು
ನೆನಪಿದೆ ಮೊದಲ ನಸುಸಕ್ಕು
ನೆನಪಿದೆ ಮೊದಲ ಸ್ಪರ್ಶ
ನೆನಪಿದೆ ಮೊದಲ ಕವನ
ನೆನಪಿದೆ ಮೊದಲ ಪಯಣ
ನೆನಪಿದೆ ಮೊದಲ ದಿನದ ಭರವಸೆಯ ಸಂಭಾಷಣೆ
ನೆನಪಿದೆ ಮೊದಲ ದಿವಸ.

ಇಂತಹ ಕೋಟಿ ನೆನಪನ್ನು ಬಲು ಬಿಗಿಯಾಗಿ ಜೋಡಿಸಿ
ಎಲ್ಲಿ ಹೋದೆ ನೀ ??

ಏಕೆ ನಿನ್ನ ಪ್ರಾಣವನ್ನು ಬಿಟ್ಟು ಬಲು ದೂರ ಹೋದೆ ನೀ ??

ಲೇಖನದ ಪ್ರಯುಕ್ತ :- ಪ್ರಿಯ ಓದುಗಾರರೆ, ಈ ಪಧ್ಯ ಕೇವಲ ನನ್ನ ಬ್ರ್ಹಮೆ. ಇದು ನಿಜ ಜೀವನದ ಕವನವಲ್ಲ :) :)

ಇಂತಿ,
ನಿಮ್ಮ ಲೇಖಕಿ.

ನನ್ನ ಪರಿಚಯ :) :)

ನನ್ನ ಈ ಪುಟ್ಟ ಗಧ್ಯ ಪಧ್ಯ ಪ್ರಪಂಚದಲ್ಲಿ  ನಾ ಇಡುತ್ಹಿರುವ,  ಮೊದಲನೆಯ ಹೆಜ್ಜೆ.

ಕೂಸಿನ ಮೊದಲ ಹೆಜ್ಜೆಯಂತೆ,
ಅದರ ನಗು, ಸಂತೋಷ,  ಎಲ್ಲವೂ
ನನ್ನ ಈ ಪುಟ್ಟ ಹೆಜ್ಜೆಗೆ ತರಲಿ ಎಂದು ಹರೈಸುತ್ಹೇನೆ.

ಇಂತಿ ನಿಮ್ಮ ಗೆಳತಿ.