Saturday, January 29, 2011

ಬಾಲಕಿಯ ದೃಡ ಮನಸ್ಸು !!

ಈ ಒಂದು ಪುಟ್ಟು ಹುಡುಗಿ, ತನ್ನ ನಾಯಿ ಮರಿಯನ್ನು ಬಹಳಷ್ಟು ನಂಬಿ, ಅದೇ ತನ್ನ ತಾಯಿ, ತಂದೆ, ಬಂಧು, ಬಳಗ, ಸ್ನೇಹಿತೆ ಎಂದು ತಿಳಿದಿದ್ದಳು. ಜಿಮ್ಮಿ ಸಹ ಅವಳ ಜೊತೆ ಸದಾಕಾಲ ಇರುತಿತ್ತು. ಅವಳು, ತನ್ನ ಶಾಲೆಗೆ ಹೋದಾಗ, ಜಿಮ್ಮಿ ಶಾಲೆಯ ಆಂಗಳದಲ್ಲಿ ಮರದ ಕೆಳಗೆ ಕಾಯುತ್ತಿತು. ದಿನಗಳು ಹೀಗೆ ಕಳೆದವು.

ಪಾಪ! ಈ ಪುಟ್ಟ ಬಾಲಕಿಯ ತಂದಿ ತಾಯಿ ಅವಳ ಇಳಿ ವಯಸಲ್ಲೇ ರಸ್ತ್ತೆಅಪಘಾತದಿಂದ ಸಾವನಪ್ಪಿಧರು.  ಈ ಹುಡುಗಿ ಕೆಲ ಕಾಲ, ತನ್ನ ಪ್ರೀತಿಯ ಅಜ್ಜಿಯ ಜೊತೆ ಇದ್ದಳು. ಆದ್ಹರೆ ವಯ್ಯಸಾದ ಅಜ್ಜಿ ಎಷ್ಟು ದಿನ ಇರುತ್ತಾರೆ ?? ಇರೋಕ್ಕೆ ಸಾಧ್ಯವೇ ??  ಅವರ ಮರಣದ ನಂತರ ಈ ಪುಟ್ಟ ಬಾಲಕಿ, ತನ್ನ ಪುಟ್ಟ ವಯಸಿನಲ್ಲಿ, ಎಷ್ಟೆಲ್ಲ ಕಷ್ಟ ಅನುಭವಿಸಿದಳು.


ಒಂದು ದಿನ, ಮನೆಯ ಅಂಗಳದಲ್ಲಿ, ಕೂತು ಅಳುತಿದ್ದಳು. ಆಗ ಅವಳಿಗೆ, ನಾಯಿ ಮರಿಯ ಧ್ವನಿ ಕೇಳಿತು. ಕುತೂಹಲದಿಂದ ಅದನ್ನು ಹುಡುಕಿದ್ದರೆ, ಅದು ಒಂದು ಸಣ್ಣ ಮೋರಿಯಲ್ಲಿ ಸಿಕ್ಕಿಹ್ಹೋಗಿತ್ತು. ಇವಳ ಮನ ಕರಗಿ, ಅಕ್ಕ ಪಕ್ಕ ದವರನ್ನು ಕರೆದು, ಅದನ್ನ ಹೊರ ತರಲು ಸಹಾಯ ಮಾಡಿ ಎಂದು ಬೇಡಿದಳು. ಎಲ್ಲರೂ ಸೇರಿ, ಅದನ್ನು ಹೊರ ತಂದರೆ, ಸ್ವಲ್ಪ ದೂರದಲ್ಲಿ ನಿಂತ್ತಿಧ  ಈ ಬಾಲಕಿಯ ಬಳಿ ಓಡಿ ಬಂದಿತು. ಏನು ಅನುಭಂದವೋ ನೋಡಿ ? ಯಾವ ಜನ್ಮದ ಫಲವೋ ಏನೋ ??


ಬಾಲಕಿ ಪ್ರತಿ ಮುಂಜಾನೆ ತನ್ನ ಇಷ್ಟ ದೇವರಾದ ಗಣಪತಿ, ಮತ್ತು ತನ್ನ ತಂದೆ ತಾಯಿ ಮತ್ತು ಅಜ್ಜಿಯ ಭಾವಚಿತ್ರದ ಮುಂದೆ ನಿಂತು, ನಿಮೆಲ್ಲರ ಆಶಿರ್ವಾದ ನನ್ನ ಮೇಲೆ ಸದಾ ಇರಲಿ. ನನ್ನ ಜಿಮ್ಮಿಗು ಸಹ ಇರಲಿ. ಜಿಮ್ಮಿ ನನ್ನ ಜೀವನದ ಪ್ರತಿ ಒಂದು ಹೆಜ್ಜೆ ಯಲ್ಲೂ ನನ್ನ ಜೊತೆ ಇರುತ್ತಾನೆ. ಅವನನ್ನು ನನ್ನ ಬಳಿ ಸದಾ ಕಾಲ ಇರುವಹಾಗೆ ಮಾಡಿ ಎಂದು ಬೇಡಿ, ತನ್ನ ಅಂತಿಮ ವಾಕ್ಯ ಹೀಗೆ ಇರುತ್ತಿತು, ದೇವ್ರೇ ಜಿಮ್ಮಿ ಸದಾ ನನ್ನ ಬಳಿ ಜೀವಾವದಿ ಇರೋ ಹಾಗೆ ಮಾಡಪ್ಪ. ನಾ ಜಿಮ್ಮಿನ ಬಿಟ್ಟು ಉಸಿರಾಡರಾಲೆ. ಎಂದು ಹೇಳುತ್ತ, ಕಣ್ಣೀರು ಸುರಿಸುತ್ತಿದ್ದಳು. 

ಏನು ಹೇಳೋದು ಈ ಬಾಲಕಿಯ ಜೀವನದ ಹಾದಿ ಹೀಗೆ ಇದ್ದಲಿ ?? ಯಾರು ನಂಬುತ್ತಾರೆ ಇವಳ ಜೀವನ ಹೀಗೆಂದರೆ ?? ಯಾರಿಗೆ ಇವಳ ನೋವು ಅರ್ಥವಾಗುವುದು ?? ಬೇರೆ ಮಕ್ಕಳು ಗುಂಟೆ ಬಿಲ್ಲೆ ಎಲ್ಲ ಆಡಿದ್ದರೆ, ಈ ಮಗು ಸದಾ ಜಿಮ್ಮಿ ಬಳಿ ಆಡುತ್ತಾಳೆ. ಇವಳ ಊಟ, ತಿಂಡಿ ಎಲ್ಲ ಪಕ್ಕದ ಮನೆಯವರಾದವರು ಕೊಡುತ್ತಾರೆ. ಯಾರು ಏನನ್ನೇ ಕೊಡಲಿ, ಅಮ್ಮ ಅಪ್ಪ ನ  ವಾತ್ಸಲ್ಯ, ಪ್ರೀತಿ, ಮಮತೆ ಕೊಡಬಲ್ಲರೆ ??
ಎಷ್ಟು ದಿನ ಇವಳನ್ನು ಮತ್ತೊಬ್ಬರು ನೋಡುಕೊಳುತ್ತಾರೆ ??


ದೇವರು ಇವಳ ಜೀವನದ ಹಾದಿಯನ್ನು ಹೇಗೆ ಸೃಷ್ಟಿಸಿದ್ದಾನೋ ಏನೋ ?


ಮೃದುವಾದ ಮನಸ್ಸು, ಮೃದುವಾದ ಜೀವಕ್ಕ್ಕೆ ಯಾವ ಜನ್ಮದ ಕರ್ಮ ತನ್ನ ಜೀವನ ಹೀಗಾಗುವುದಕ್ಕೆ ?? ಆದರೆ ಅವಳ ಛಲ ಯಾವತ್ತಿಗೂ ಕಮ್ಮಿ ಆಗಿದ್ದಿಲ. ಬಹಳಷ್ಟು ಓದುವ ಆಸೆ, ಜೀವನದಲ್ಲಿ ಏನಾದರೂ ಸಾದಿಸುವ ಆಸೆ, ತಾನು ಮುಂದೆ ತನ್ನ ಕಾಲಿನ ಮೇಲೆ ನಿಲ್ಲುವ ಆಸೆ. ಅವಳಿಗೆ ದೇವರ ಭಕ್ತಿ ಅಪಾರವಾಗಿತ್ತು. ದೇವರ ಪೂಜೆಯನ್ನು  ಅವಳು ಯಾವತ್ತು ತಪ್ಪುತ್ತಿರಲಿಲ್ಲ. ಪ್ರತಿ ದಿನ ದೇವಸ್ಥಾನಕ್ಕೆ ಹೋಗಿಬರುತ್ತಿದ್ದಳು. 

ಎಲ್ಲರಿಗೂ ಅವಳು ಹೆಮ್ಮೆಯಿಂದ ಹೇಳುತ್ತಿದ್ದಳು, ದೇವರು ಅವಳಿಗೆ ಒಂಟಿ ಯಾಗಿ ಜೀವನದಲ್ಲಿ ಸಾಧನೆ ಮಾಡಿ, ಅವಳ ಮನೋ ಬಲವನ್ನು ಆತ್ಮವಿಶ್ವಾಸವನ್ನು ಸಾಧಿಸುವುದಕ್ಕೆ ಈ ಜೀವನ ನೀಡಿದ್ದಾನೆ. ಆದ್ದರಿಂದ ನನಿಗೆ ಯಾರು ಅಯ್ಯೋ ಪಾಪ ಅಂತ ಹೇಳಬೇಡಿ. ದೇವರ ಆಶೀರ್ವಾದ, ಅಪ್ಪ ಅಮ್ಮ ನ ಕರುಣೆ, ವಾತ್ಸಲ್ಯ, ಮಮತೆ, ಪ್ರೀತಿ, ಆಶೀರ್ವಾದ ಎಲ್ಲವೂ ವುಕ್ಕಿ ಹರಿಯುತ್ತಿದೆ. ನಾ ದೇವರಿಗೆ ಎಷ್ಟು ರುನ್ಣಿಯಾದರು ಸಾಲದು. ಇದು ದೇವರು ನನಿಗೆ ನೀಡಿರುವ ವರ!

ಮೊದಲನೇ  ಬಾರಿ ನಾನು ಇಂತಹದ ಲೇಖನವನ್ನು ಬರಿದಿದ್ದಿನಿ. ಹೇಗೆ ಇಧ್ಯೋ ಏನೋ ? ಎಷ್ಟು ಜನ ತಮ್ಮ ಜೀವನದ ಸಣ್ಣ ಪುಟ್ಟ  ಕಷ್ಟವನ್ನು ಅತಿ ಭಾರವಾಗಿ ತಗೆದುಕೊಳ್ಳುತ್ತಾರೆ. ಅವರವರ ಕಷ್ಟ ಅವರಿಗೆ ಹೆಚ್ಹು. ಆದ್ದರೆ ಎಷ್ಟು ಬಡ ಮಕ್ಕಳು ಕಷ್ಟ ಪಟ್ಟು ಮುಂದೆ ಬಂದು ಸಾದಿಸಿಧಾರೆ....ಸಾದಿಸುತ್ತಿದ್ದಾರೆ......ಹಾಗಾಗಿ, ಮನ ಕರಗಿ ಅಳುವಂತ್ತೆ ಮಾಡಿಕೊಳ್ಳಬಾರದು. ಧೈರ್ಯ ದಿಂದ ಎದುರಿಸಬೇಕು. ಇದೆ ಜೀವನ. ಇಡಿ ಜೀವನ ಕಹಿ ಸಿಹಿ ಘಟನೆಗಳು ನಡೆಯುತ್ತಿರುತ್ಹವೇ 



ಇಂತಿ.  
ಲೇಖಕಿ.  


Monday, July 26, 2010

ಜಯ ಜನಾರ್ಧನ ಕೃಷ್ಣ ರಾಧಿಕಾ ಪತಿ......


ಮೂರೂ ವರ್ಷದ ಹುಡುಗಿ ಹಾಡಿರುವ ಜಯ ಜನಾರ್ಧನ ಕೃಷ್ಣ ರಾಧಿಕಾ ಪತಿ ಹಾಡು ಬಹಳ ಸುಂದರವಾಗಿದೆ.

Thursday, July 8, 2010

ವೀಣೆಯ ತಂತಿ!!!!!!!!!!!!

ನನ್ನ ಮನಸು ವೀಣೆಯ ತಂತಿಯಂತೆ,
ಸದಾ ಇಂಪಾದ ಸೊಗಸಾದ ಹಾಡುಗಳನ್ನು ನುಡಿಸುತ್ತ 
ನಿನ್ನ ಮನಸಿನ ವಿಷಯವನ್ನು ಸದಾ ನುಡಿದು 
ನನ್ನ ಬಾಳಿನ ಜೊತೆ ಗಾರನನ ಹಾಗೆ ಮಾಡಿದೆ.

ನೀನು ಬಹು ದೂರ ಇದ್ದು ನನ್ನ ಮೇಲೆ 
ನಿನಗೆ ಇರುವ ಪ್ರೀತಿ, ಗೌರವ, ಮಮತೆ, ಕರುಣೆ,
ನನ್ನ ನೆನಪು ನಿನಗೆ ಸದಾ ಇರುವುದೆಂಬುದು
ನಮ್ ಇಬ್ಬರ ವೀಣೆಯ ತಂತಿಗಳು ನುಡಿಸುತ್ತಿರುತದೆ .


ನಮ್ಮ ಈ ವೀಣೆಯ ತಂತಿ ಸಾದಾ ಹೀಗೆ ಇರಲಿ
ಎಂದು ಆಶಿಸೋಣ. 


ಓದುಗಾರರೆ, ನನ್ನ ಕನ್ನಡದ ಬರಹ ಇನ್ನು ಬಹಳಷ್ಟು ಸುಧಾರಿಸಬೇಕು. ನಿಮ್ಮೆಲರ ಸಲಹೆ ಇಂದ ನಾ ಬೇಗನೆ ಸರಿಪಡಿಸಬಹುದು. 

Wednesday, June 9, 2010

ಗೆಳತಿ ಎಲ್ಲಿ ಹೋಗಿರುವೆ ನೀ :( :(


ನನ್ನ ಒಂದ್ ಒಂದ್ ನೆಟುಸಿರಿನಲ್ಲು 
ನಿನನ್ನು ನೆನಸಿ, ನಂಬಿ ಜೀವನ ಸಾಗಿಸುತ್ಹಿಧ 
ಈ ಗೆಳಯ ನೀ ಹೀಗೆ ಕೈ ಕೊಟ್ಟಿದನ್ನು 
ನಾ ತಡೆಯಲಾರೆ ಗೆಳತಿ....
ನನ್ನ ಹೃದಯ ಅಪಗಾತ್ಹ ಕಂಡಿತ....
ನಾ ತಡೆಲಾರೆ ನನ್ನ ಗೆಳತಿ........

ಗೆಳತಿ ಎಲ್ಲಿ ಹೋಗಿರುವೆ ನೀ
ನನನ್ನು ಬಿಟ್ಟು ಎಲ್ಲಿ ಹೋಗಿರುವೆ ??
ನಿನನ್ನು ಮರೆತು, ನಿನನ್ನು ಬಿಟ್ಟು ನಾ ಇರಯಲಾರೆ ಗೆಳತಿ....
ನಾ ಇರಲಾರೆ ನನ್ನ ಗೆಳತಿ.......

ನಮ್ಮ ಈ ಸ್ನೇಹದ ಅನುಬಂಧದ 
ಪ್ರಶ್ನೆ ಎಂದೆಂದಿಗೂ ಉತ್ತರ ಸಿಗದೇಹೋಗುವುದು 
ಖಂಡಿತ  ....ಆದರೆ ನೀ ನನಗೆ ಮತ್ತೆ ಸಿಗುವೆ ಎಂದು
ನನಗೆ ಮನಪೂರ ನಂಬಿಕೆ ಇದೆ
ನಂಬಿಕೆ ಉಂಟು ಗೆಳತಿ....ನಂಬಿಕೆ ಉಂಟು :) :)


ಲೇಖನದ ಪ್ರಯುಕ್ತ :- ಆತ್ಮೀಯ ಓದುಗಾರರೆ, ನನ್ನ ಈ ಕವನ ಅಷ್ಟು ಸುಂದರವಾಗಿ ಇಲ್ಲ. ನಿಮ್ಮ ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ಕಂಡಿತ ತಿಳಿಸಿರಿ. ಇನ್ನು ಮುಂದೆ ಬರೆಯುವಂಥಹ ಕವನಗಳನ್ನು ಸ್ವಲ್ಪ ಮಟ್ಟಿಗೆ ಚೆನ್ನಾಗಿ ಬರಿಯುವಂತೆ ನಾ ನಿಮಗೆಲ್ಲ ಆಶ್ವಾಸನೆ ನೀಡುತ್ತೇನೆ.

ಇಂತಿ, 
ನಿಮ್ಮ ಲೇಖಕಿ.

Wednesday, May 26, 2010

ಅತಿಯಾದ ಭರವಸೆ !!!!!!!!!!!


ನಿ ಎಲ್ಲಿ ಹೋದೆ,
ನಿನ್ನ ಈ ಪ್ರಾಣ
ನಿನನ್ನು ಹುಡುಕುತಾ
ಬಲು ದೂರ ತಲುಪಿ .........ಸಿಗದ ಕಾರಣ
ಎದೆ ಕುಸಿದು, ನೆನಪೆಲ್ಲ ಮುರಿದು
ನಾ ಆದೆ ಒಂಟಿ ಜೀವನದ ಸಹವಾಸಿ,
ನಾ ಸೇರಿದೆ ಒಂಟಿ ಜೀವನದ ಸಂಘ.

ನೆನಪಿದೆ ಮೊದಲ ಕನಸು
ನೆನಪಿದೆ ಮೊದಲ ನಸುಸಕ್ಕು
ನೆನಪಿದೆ ಮೊದಲ ಸ್ಪರ್ಶ
ನೆನಪಿದೆ ಮೊದಲ ಕವನ
ನೆನಪಿದೆ ಮೊದಲ ಪಯಣ
ನೆನಪಿದೆ ಮೊದಲ ದಿನದ ಭರವಸೆಯ ಸಂಭಾಷಣೆ
ನೆನಪಿದೆ ಮೊದಲ ದಿವಸ.

ಇಂತಹ ಕೋಟಿ ನೆನಪನ್ನು ಬಲು ಬಿಗಿಯಾಗಿ ಜೋಡಿಸಿ
ಎಲ್ಲಿ ಹೋದೆ ನೀ ??

ಏಕೆ ನಿನ್ನ ಪ್ರಾಣವನ್ನು ಬಿಟ್ಟು ಬಲು ದೂರ ಹೋದೆ ನೀ ??

ಲೇಖನದ ಪ್ರಯುಕ್ತ :- ಪ್ರಿಯ ಓದುಗಾರರೆ, ಈ ಪಧ್ಯ ಕೇವಲ ನನ್ನ ಬ್ರ್ಹಮೆ. ಇದು ನಿಜ ಜೀವನದ ಕವನವಲ್ಲ :) :)

ಇಂತಿ,
ನಿಮ್ಮ ಲೇಖಕಿ.

ನನ್ನ ಪರಿಚಯ :) :)

ನನ್ನ ಈ ಪುಟ್ಟ ಗಧ್ಯ ಪಧ್ಯ ಪ್ರಪಂಚದಲ್ಲಿ  ನಾ ಇಡುತ್ಹಿರುವ,  ಮೊದಲನೆಯ ಹೆಜ್ಜೆ.

ಕೂಸಿನ ಮೊದಲ ಹೆಜ್ಜೆಯಂತೆ,
ಅದರ ನಗು, ಸಂತೋಷ,  ಎಲ್ಲವೂ
ನನ್ನ ಈ ಪುಟ್ಟ ಹೆಜ್ಜೆಗೆ ತರಲಿ ಎಂದು ಹರೈಸುತ್ಹೇನೆ.

ಇಂತಿ ನಿಮ್ಮ ಗೆಳತಿ.